ಜನನ - ಮೇ. ೨೧.೧೯೩೨ ಮರಣ - ಆಗಸ್ಟ್.೧೪.೨೦೦೦ ಪ್ರಸಿದ್ಧ ಕಾದಂಬರಿಗಾರ್ತಿ ಸುನೀತಿ ಕೃಷ್ಣ ಸ್ವಾಮಿಯವರು ಮೈಸೂರಿನವರು. ತಂದೆ ಸುಬ್ಬರಾವ್ ಮತ್ತು ತಾಯಿ ಪಾರ್ವತಮ್ಮ. == ಬರವಣಿಗೆ == ಇವರ ಬರವಣಿಗೆ ಪ್ರಾರಂಭವಾಗಿದ್ದು ಕೊರವಂಜಿ ಪತ್ರಿಕೆಯ ಮೂಲಕ. ೧೯೬೯ ರಲ್ಲಿ ಕನ್ನಡಪ್ರಭ ದಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಅದೃಷ್ಟ ಚಕ್ರಇವರ ಮೊಟ್ಟ ಮೊದಲನೆಯ ಕಾದಂಬರಿ. ಪಚ್ಚೆ ಮನೆ ಎಂಬ ಇನ್ನೊಂದು ಕಾದಂಬರಿ ೧೯೭೨ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. == ಇತರ ಕಾದಂಬರಿಗಳು == ಪಚ್ಚೆ ಮನೆ (೧೯೭೮) ಅದೃಷ್ಟ ಚಕ್ರ(೧೯೭೯) ಸಂಧ್ಯಾ ಕಿರಣ(೧೯೮೨) ಸ್ಮೃತಿ ತರಂಗ(೧೯೭೯) ಡಾಕ್ಟರ್ ರಮ್ಯ(೧೯೮೦) ಮಂದಾರ(೧೯೮೦) ಗಿಣಿ-ರಾಗಿಣಿ-ವಿರಾಗಿಣಿ(೧೯೮೨) ಮೃಗಜಲ(೧೯೮೩) ದೀಪ ಲಕ್ಷ್ಮೀ(೧೯೮೨) ಕಂದರದಿಂದ ಅಂಬರಕ್ಕೆ ಕ್ಯಾನ್ಸರ್ ಕಾಯಿಲೆಯಿಗೆ ತುತ್ತಾಗಿದ್ದರೂ ಧೃತಿಗೆಡದೆ ಕಿದ್ವಾಯಿಸಂಸ್ಥೆಯ ಪತ್ರಿಕೆಗಳಿಗೆ ಹಲವಾರು ಲೇಖನಗಳನ್ನು ಬರೆದು, ಕ್ಯಾನ್ಸರ್ ಪೀಡಿತರಿಗೆ ಧೈರ್ಯ ತುಂಬುತ್ತಿದ್ದರು.